ಮಟರ್ ಪನೀರ್ (ಹಿಂದಿ:मटर पनीर) ಉತ್ತರ ಭಾರತದ ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದು ಬಟಾಣಿ ಮತ್ತು ಪನೀರ್‌ನ್ನು ಟೊಮೇಟೊ ಆಧಾರಿತ ಸಾಸ್‍ನಲ್ಲಿ ಹೊಂದಿರುತ್ತದೆ. ಸಂಬಾರ ಪದಾರ್ಥವಾಗಿ ಗರಂ ಮಸಾಲಾವನ್ನು ಸೇರಿಸಲಾಗುತ್ತದೆ. ಇದನ್ನು ಹಲವುವೇಳೆ ಅನ್ನ ಮತ್ತು ಭಾರತೀಯ ಬ್ರೆಡ್‍ನ ವಿಧದೊಂದಿಗೆ (ಪ್ರದೇಶವನ್ನು ಅವಲಂಬಿಸಿ ನಾನ್, ಪರಾಠಾ, ಪೂರಿ ಅಥವಾ ರೋಟಿ) ಬಡಿಸಲಾಗುತ್ತದೆ. ಹಲವುವೇಳೆ ಆಲೂಗಡ್ಡೆ, ಮೆಕ್ಕೆ ಜೋಳ, ಮೊಸರು ಅಥವಾ ಕೆನೆಯಂತಹ ಇತರ ವಿವಿಧ ಘಟಕಾಂಶಗಳನ್ನು ಸೇರಿಸಲಾಗುತ್ತದೆ. == ಛಾಯಾಂಕಣ == == ಉಲ್ಲೇಖಗಳು ==